POWER SAMACHARA | KANNADA NEWS | BREKING NEWS| 24-01-2024
ದಾವಣಗೆರೆ : ದಾವಣಗೆರೆಯಲ್ಲಿ ನಡೆಯುವ ದುಗ್ಗಮ್ಮ ಜಾತ್ರೆ ಮಧ್ಯ ಕರ್ನಾಟದಲ್ಲೇ ಸಖತ್ ಫೇಮಸ್ಸ್, ಈ ಜಾತ್ರೆಗೆ ದಿನಾಂಕ ನಿಗಧಿಯಾಗಿದ್ದು, ದಿನಗಣನೆ ಶುರುವಾಗಿದೆ, ಮಾರ್ಚ್ 19 ಮತ್ತು 20 ರಂದು ಅದ್ದೂರಿ ಜಾತ್ರೆ ನಡೆಸಲು ದೇವಸ್ಥಾನ ಸಮಿತಿ ತೀರ್ಮಾನಿಸಿ ದಿನಾಂಕ ಘೋಷಣೆ ಮಾಡಿದೆ..
ದಾವಣಗೆರೆ ನಗರದ ದುಗ್ಗಮ್ಮ ದೇವಸ್ಥಾನದ ಮುಂಭಾಗದ ಪ್ರಸಾದ ನಿಲಯದಲ್ಲಿ ಹಿರಿಯ ಶಾಸಕ ಹಾಗೂ ದೇವಸ್ಥಾನ ಸಮಿತಿ ಗೌರವಾಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು, ಈ ವೇಳೆ ಶಾಮನೂರು ಶಿವಶಂಕರಪ್ಪ, ದೇವಸ್ಥಾನದ ಪುರೋಹಿತರಾದ ನಾಗರಾಜ್ ಜೋಯಿಸ್ ರು ದಿನಾಂಕ ಘೋಷಣೆ ಮಾಡಿದರು. ಬರುವ ಫೆಬ್ರುವರಿ 13ರಂದು ಬೆಳಿಗ್ಗೆ 11ಗಂಟೆಗೆ ಹಂದರ ಕಂಬ ಪೂಜೆಯ ಮೂಲಕ ಹಬ್ಬಕ್ಕೆ ಚಾಲನೆ ಸಿಗಲಿದೆ, ಮಾರ್ಚ್ 17ರಂದು ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ 8ಗಂಟೆಗೆ ಕಂಕಣಧಾರಣೆ, ನಂತರ ಕೋಣದೊಂದಿಗೆ ನಗರದಲ್ಲಿ ಸಾರುವುದು, 18,19 ರಂದು ದೇವಿಗೆ ವಿಶೇಷ ಅಲಂಕಾರ, ಭಕ್ತಿ ಸಮರ್ಪಣೆ, 20ರಂದು ಮುಂಜಾನೆ ಚರಗ ಕಾರ್ಯಕ್ರಮಗಳು ಜರುಗುವುದು, ಜೊತೆಗೆ ಪ್ರತಿ ವರ್ಷದಂತೆ ಕುರಿಕಾಳಗ, ಕುಸ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು..
ಕುರಿ ಕಾಳಗ ಬೇಡ ಎಂದರೆ ಕುಸ್ತಿಯೂ ಬೇಡ, ಏನೂ ಬೇಡ..
ಕುರಿ ಕಾಳಗದಲ್ಲಿ ಜಗಳಗಳು ಉಂಟಾಗುತ್ತವೆ, ಈ ಹಿನ್ನಲೆ ಕುರಿ ಕಾಳಗ ಮಾಡುವಂತಿಲ್ಲ ಎಂದು ಸಮಿತಿಯವರು ತಿಳಿಸಿದರು. ಇದಕ್ಕೆ ನಿಖಿಲ್ ಸೇರಿದಂತೆ ಹಲವು ಯುವಕರು ಕೆರಳಿದರು, ಕುರಿ ಕಾಳಗ ಬೇಡ ಎಂದರೆ ಕುಸ್ತಿಯೂ ಬೇಡ, ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಡ ಸಿಂಪಲ್ ಆಗಿ ಹಬ್ಬ ಮಾಡಿಬಿಡಿ ಎಂದು ಪಟ್ಟು ಹಿಡಿದರು, ಈ ವೇಳೆ ಕೆಲವೊತ್ತು ಗದ್ದಲ, ವಾಗ್ವಾದ ಉಂಟಾಯಿತು, ಕೊನೆಗೆ ಮಧ್ಯ ಪ್ರವೇಶ ಮಾಡಿದ ಶಾಮನೂರು ಶಿವಶಂಕರಪ್ಪ, ಪ್ರತಿ ಹಬ್ಬದಂತೆ ಕಾರ್ಯಕ್ರಮಗಳು ಮುಂದುವರೆಯಲಿ, ಯಾವುದೇ ಬದಲಾವಣೆ ಮಾಡುವುದು ಯುವಕರು ಕುರಿ ಕಾಳಗ ಮಾಡಿಕೊಳ್ಳಲಿ ಎಂದು ಸಮಾಧಾನ ಮಾಡಿದರು..
ಇನ್ನೂ ಬಿಲ್ಡಿಂಗ್ ನಿರ್ಮಾಣ ವಿಚಾರ ಶಾಮನೂರು ಶಿವಶಂಕರಪ್ಪ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ನಡುವೆ ವಾಗ್ವಾದ ಉಂಟಾಯಿತು, ಮೂರುವರೆ ಲಕ್ಷಕ್ಕೆ ಐವತ್ತು ಲಕ್ಷ ರೂಪಾಯಿ ಜಿಎಸ್ ಟಿ ಕಟ್ಟಿದ್ದೀರಿ, ರೇಣುಕಾ ಮಂದಿರ ನಿರ್ಮಾಣಕ್ಕೆ ಜಿಎಸ್ ಟಿ ಹಾಕಿಲ್ಲ ಎಂದು ಅಥಣಿ ವೀರಣ್ಣನವರನ್ನೂ ಪ್ರಶ್ನೆ ಮಾಡಿದರು. ಈ ವೇಳೆಯೂ ವಾಗ್ವಾದ ಉಂಟಾಯಿತು. ಕಮಿಟಿ ಸಭೆಯಲ್ಲಿ ಲೆಕ್ಕ ತಿಳಿಸಲಾಗುವುದು ಎಂದು ಅವಸರದಲ್ಲೇ ಸಭೆ ಮುಕ್ತಾಯಗೊಳಿಸಲಾಯಿತು.. ಈ ಸಂದರ್ಭದಲ್ಲಿ ಮೇಯರ್ ವಿನಾಯಕ್ ಪೈಲ್ವಾನ್, ಉಪಮೇಯರ್ ಯಶೋಧ ಹೆಗ್ಗಪ್ಪ ಸೇರಿದಂತೆ ಹಿರಿಯ ಮುಖಂಡರು, ಸಮಿತಿಯವರು, ಯುವಕರು ಹಾಜರಿದ್ದರು..