POWER SAMACHARA | KANNADA NEWS | BREKING NEWS| 14-01-2024
ದಾವಣಗೆರೆ: ಒಂದು ಕೋಟಿ ರೂಪಾಯಿ ಹವಾಲ ಹಣ ಸೀಜ್ ಹಿನ್ನಲೆ ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಸುದ್ದಿಗೋಷ್ಠಿ ನಡೆಸಿ ಗುಡುಗಿದ್ದಾರೆ. ಎಂಪಿ ಚುನಾವಣೆ ಹಿನ್ನಲೆ ಷಡ್ಯಂತ್ರ ನಡೆಸಿ ತೇಜೋವಧೆ ಮಾಡಲಾಗ್ತಿದೆ, ಹವಾಲ ದಂದೆಯಲ್ಲಿ ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡಿದ್ದಾರೆ, ಹವಾಲ ಹಣ ಎಂದರೇ ಏನು ಎಂದೇ ಗೊತ್ತಿಲ್ಲ, ನಾಲ್ಲು ಭಾರೀ ಗೆದ್ದಿದ್ದೇನೆ, ಐದನೇ ಭಾರೀ ಗೆಲ್ಲುತ್ತೇನೆ ಎಂದು ಸುಳ್ಳು ಪ್ರಚಾರ ಮಾಡಲಾಗ್ತಿದೆ, ಇದಕ್ಕೆ ನಾನು ಜಗ್ಗಲ್ಲ, ಪಿತೂರಿ, ಅಪಪ್ರಚಾರ ಮಾಡಿದರೇ ಯಾರನ್ನೂ ಬಿಡೋದಿಲ್ಲ, ಐವತ್ತು ಕೋಟಿ ರೂಪಾಯಿ ಮಾನನಷ್ಟ ಮೊಕದಮೆ ಹೂಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ..
ನಮ್ಮ ಬೆಂಬಲಿಗರಾದ ಯೋಗೇಶ್, ಮಲ್ಲಿಕಾರ್ಜುನ್ ಎಂಬುವವರು ಅಡಿಕೆ ತೆಗೆದುಕೊಂಡು ಬರಲು ಹೋಗುವ ಸಂದರ್ಭದಲ್ಲಿ ಕಾರಿನಲ್ಲಿ ಟ್ಯಾಕ್ಸಿ ಚಾಲಕ ಸ್ವಾಮಿ ಹಾಗೂ ಅನುಪಮ ಎನ್ನುವವರು ಸೇರಿ ಹಣ ಕದ್ದು ಸಿಕ್ಕಿ ಬಿದ್ದಿದ್ದಾನೆ, ಆ ಡ್ರೈವರ್ ಸ್ವಾಮಿ ನಮ್ಮ ಡ್ರೈವರ್ ಅಲ್ಲವೇ ಅಲ್ಲ, ಅವನಿಂದ ಪೊಲೀಸರು ಹಣ ವಸೂಲಿ ಮಾಡಿದ್ದಾರೆ, ಹವಾಲ ಆಗಿದ್ದಾರೆ, ವಾಪಾಸ್ ಯಾಕೆ ಕೊಡುತ್ತಿದ್ದರು ಹೇಳಿ ಎಂದು ಸ್ಪಷ್ಟನೆ ನೀಡಿದರು..
ಭಯ ಆಗ್ತಿದೆ, ಕೊಲೆನೂ ಮಾಡಬಹುದು..!
ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನೋಡಿದರೆ ಚುನಾವಣೆಯಲ್ಲಿ ನನ್ನನ್ನು ಮುಗಿಸುವ ಷಡ್ಯಂತ್ರ ತಯಾರಾಗಿದೆ ಎಂದು ಅನಿಸುತ್ತಿದೆ, ಮುಂದೇ ಕೊಲೆನೂ ಮಾಡಲು ಇವರು ಏಸೋದಿಲ್ಲ, ವಿಷ ಹಾಕೋಕು ಮುಂದಾಗಬಹುದು, ನನ್ನನ್ನು ಎದುರಿಸಲಾಗದವರಿಂದ ಅಪಪ್ರಚಾರ ಮಾಡುತ್ತಿದ್ದಾರೆ, ಮೂರು ತಿಂಗಳ ಹಿಂದೇ ನಡೆದ ಪ್ರಕರಣವನ್ನ ಈಗ ಅಪಪ್ರಚಾರ ಮಾಡಿದ್ದಾರೆ, ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ, ಈ ವ್ಯಾಪಾರಕ್ಕೂ ನಮಗೂ ಸಂಬಂಧವೇ ಇಲ್ಲ ಎಂದರು..
ವರ್ಷಕ್ಕೆ 50 ಕೋಟಿ ಟ್ಯಾಕ್ಸ್ ಕಟ್ತೇವೆ..!
ಏನೇ ಮಾಡಿದರೂ ಅಕೌಂಟ್ ಮೂಲಕ ಕೊಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತೇವೆ, ವರ್ಷಕ್ಕೆ 50ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟುತ್ತೇವೆ, ಯಾವುದು ಅವ್ಯವಹಾರ ಮಾಡಿಲ್ಲ, ಮಾಡೋದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಮಾಡಿ ಮಾನಹಾನಿ ಮಾಡಿದ್ದಾರೆ, ವ್ಯಥೆ ಆಗ್ತಿದೆ, ಎದುರಾಳಿಗಳ ಕೈವಾಡ ಇದೆ, ನನ್ನನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ, ಇಲ್ಲಿ ನಾಲ್ಕು ಸರಿ ಗೆದ್ದಿರೋನು ನಾನೇ, ಎಲ್ಲರು ಸೇರಿ ಹುನ್ನಾರ ಮಾಡುತ್ತಿದ್ದಾರೆ, ಟಾರ್ಗೆಟ್ ಮಾಡಿದ್ರೆ ಬಿಡಲ್ಲ, ಕಾಂಗ್ರೆಸ್ ನ ದಿನೇಶ್ ಶೆಟ್ಟಿ ಸೇರಿ ಯಾರೇ ಅಪಪ್ರಚಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಸಂಸದ ಸಿದ್ದೇಶ್ವರ್ ಎಚ್ಚರಿಕೆ ನೀಡಿದ್ದಾರೆ..