POWER SAMACHARA | KANNADA NEWS | BREKING NEWS| 15-11-2023..
ದಾವಣಗೆರೆ: ಫೋಕ್ಸೊ ಪ್ರಕರಣದಡಿ ಬಂಧಿತರಾಗಿ ಚಿತ್ರದುರ್ಗ ಜಿಲ್ಲಾ ಕಾರಾಗೃಹ ಸೇರಿರುವ ಮುರುಘಾ ಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾ ಶರಣರು ಬರೋಬ್ಬರಿ ಒಂದು ವರ್ಷದ ಬಳಿಕ ನಾಳೆ ಬಹುತೇಕ ಬಿಡುಗಡೆ ಆಗುವುದು ಪಕ್ಕಾ ಆಗಿದೆ..
ಫೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು, ಈ ಹಿನ್ನಲೆ ಚಿತ್ರದುರ್ಗ 2ನೇ ಅಪರ & ಸತ್ರ ನ್ಯಾಯಾಲಯ ದಾಖಲೆ ಪರಿಶೀಲನೆ ನಡೆಸಿದ್ದು, ಹೈ ಕೋರ್ಟ್ ಜಾಮೀನು ನೀಡಿದ್ದನ್ನು ಸಮ್ಮತಿಸಿದೆ, ಮತ್ತೊಂದು ಪೋಸ್ಕೊ ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರು, ಆದರೆ ಈ ಪ್ರಕರಣದ ವಿಚಾರಣೆ ನಾಳೆಗೆ ಮುಂದೂಡಿಕೆ ಆಗಿತ್ತು, ಇತ್ತ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆದೇಶದ ಪ್ರತಿಯನ್ನು ಶರಣರ ಪರ ವಕೀಲರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೈಕೋರ್ಟ್ ವಿಧಿಸಿದ ಷರತ್ತುಗಳ ಅನ್ವಯ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಏಳು ಷರತ್ತು ವಿಧಿಸಿ ಹೈ ಕೋರ್ಟ್ ಜಾಮೀನು ನೀಡಿತ್ತು, ಶ್ಯೂರಿಟಿ, ಬಾಂಡ್, ಪಾಸ್ ಪೋರ್ಟ್ ಕೋರ್ಟ್ ಗೆ ಸಲ್ಲಿಕೆ ಮಾಡಲಾಗಿತ್ತು, ಇದರ ಪರಿಶೀಲನೆ ನಡೆಸಿದ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ, ದಾಖಲೆ ಪರಿಶೀಲಿಸಿ ಮೊದಲ ಕೇಸ್ ಗೆ ಹೈಕೋರ್ಟ್ ಜಾಮೀನು
ನೀಡಿದ್ದನ್ನು ಸಮ್ಮತಿಸಿದೆ, ಹೀಗಾಗಿ ಚಿತ್ರದುರ್ಗ ಕೋರ್ಟ್ ಆದೇಶ ಪ್ರತಿ ಕಾರಾಗೃಹಕ್ಕೆ ಸಲ್ಲಿಕೆ ಮಾಡಲಾಗಿತ್ತು, ಬುಧವಾರ ರಾತ್ರಿ 7ಗಂಟೆಯವರೆಗೂ ಶ್ರೀಗಳು ಬಿಡುಗಡೆಯಾಗುತ್ತಾರೆ ಎಂದು ಶ್ರೀಗಳ ಪರ ವಕೀಲರು, ಅಭಿಮಾನಿಗಳು ಹೇಳಿಕೆ ನೀಡಿದ್ದರು, ಆದರೆ ತಡವಾದ ಹಿನ್ನಲೆ ಬಿಡುಗಡೆಯನ್ನ ನಾಳೆಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ನಾಳೆ ಬಿಡುಗಡೆಯಾದ ಬಳಿಕ ಸ್ವಾಮಿಜಿ, ಕೋರ್ಟ್ ಷರತ್ತು ಅನ್ವಯ ಮಠಕ್ಕೆ ತೆರಳುವಂತಿಲ್ಲ ಹಾಗೂ ಚಿತ್ರದುರ್ಗದಲ್ಲಿ ಇರುವಂತಿಲ್ಲ, ಹೀಗಾಗಿ ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿರುವ ಜೆಡಿಎಸ್ ಪಕ್ಷದ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಅವರ ನಿವಾಸದಲ್ಲಿ ಮುರುಘಾ ಶ್ರೀ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ..
ಪಿಪಿ ಹೇಳೋದೇನು..?
ಇನ್ನೂ ಸರ್ಕಾರಿ ಪರ ವಕೀಲ ಜಗದೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಎರಡನೇ ಫೋಕ್ಸೋ ಪ್ರಕರಣದಲ್ಲಿ ಬಾಡಿ ವಾರೆಂಟ್ ಇದೆ, ಎರಡನೇ ಫೋಕ್ಸೋ ಕೇಸಲ್ಲಿ ಜಾಮೀನು ಮಂಜೂರಾಗಿಲ್ಲ, ನಾಳೆವರೆಗೆ ಮುರುಘಾ ಶ್ರೀಗಳಿಗೆ ಬಾಡಿ ವಾರೆಂಟ್ ನಲ್ಲಿರುತ್ತಾರೆ, ನಾಳೆ ಕೋರ್ಟ್ ನಲ್ಲಿ ಈ ಬಗ್ಗೆ ವಾದ ಮಂಡನೆ ನಡೆಯಲಿದೆ, ಬಳಿಕ ಕೋರ್ಟ್ ಮುರುಘಾಶ್ರೀ ಪ್ರಕರಣದ ಬಗ್ಗೆ ಆದೇಶ ನೀಡಲಿದೆ, ಮೊದಲ ಕೇಸ್ ನಲ್ಲಿ ಜಾಮೀನು ಬಗ್ಗೆ ಮುರುಘಾ ಶ್ರೀ ಪರ ವಕೀಲರು ಕಾರಾಗೃಹಕ್ಕೆ ಆದೇಶ ಪ್ರತಿ ನೀಡಬಹುದು, ನಾವು ಸಹ ಎರಡನೇ ಕೇಸಲ್ಲಿ ಬಾಡಿ ವಾರೆಂಟ್ ಇರುವುದನ್ನು ಕಾರಾಗೃಹಕ್ಕೆ ಸಲ್ಲಿಸುತ್ತೇವೆ, ಕಾನೂನು ಪ್ರಕಾರ ನಾವು ಬಾಡಿ ವಾರೆಂಟ್ ಕೇಳಿದ್ದೇವೆ, ನ್ಯಾಯಾoಗ, ಪೊಲೀಸ್ ಇಲಾಖೆಗೆ ಯಾವುದೇ ದುರುದ್ದೇಶ ಇಲ್ಲ ಎಂದಿದ್ದಾರೆ..
ಮುರುಘಾ ಶ್ರೀ ಪರ ವಕೀಲರು ಹೇಳೋದೇನು..!
ಈ ವೇಳೆ ಮುರುಘಾ ಶ್ರೀ ಪರ ವಕೀಲ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಎರಡನೇ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇಂತಹ ಸಂದರ್ಭದಲ್ಲಿ ತಳಹಂತದ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಸುವುದು ತಪ್ಪಾಗುತ್ತದೆ. ಒಂದೊಮ್ಮೆ ಹಾಗೆ ಮಾಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. 2ನೇ ಫೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಬಾಡಿ ವಾರೆಂಟ್ ಇದೆ, ನ್ಯಾಯಾಂಗ ಬಂಧನ ವಿಸ್ತರಿಸಲು ಸರ್ಕಾರಿ ವಕೀಲ ಜಗದೀಶ್ ಅವರಿಂದ ಮನವಿ ಸಲ್ಲಿಕೆ ಆಗಿದೆ, ಕೋರ್ಟ್ 2ನೇ ಕೇಸ್ ನ ವಿಚಾರಣೆ ನಾಳೆಗೆ ಮುಂದೂಡಿದೆ, ಮುರುಘಾ ಶ್ರೀಗಳಿಗೆ ಕಿರುಕುಳ ನೀಡಲು ಈ ರೀತಿಯ ವ್ಯವಸ್ಥೆ ನಡೆಯುತ್ತಿದೆ, ಈ ಹಿನ್ನಲೆ ನಿಯಮಾನುಸಾರ ಮುರುಘಾ ಶ್ರೀಗಳು ಇಂದೇ ಬಿಡುಗಡೆ ಆಗಬೇಕಿತ್ತು, ಆದರೆ ಸ್ವಲ್ಪ ತಡವಾದ ಹಿನ್ನಲೆ ನಾಳೆ ರಿಲೀಸ್ ಆಗುತ್ತಾರೆ, ಎರಡನೇ ಕೇಸ್ ನಲ್ಲಿ VC ಮೂಲಕ ಮುರುಘಾಶ್ರೀ ಹಾಜರಾಗ್ತಾರೆ ಎಂದು ತಿಳಿಸಿದರು..
ಬಾಡದ ಆನಂದರಾಜ್ ನೇತೃತ್ವದಲ್ಲಿ ಸಂಭ್ರಮ..
ಫೋಕ್ಸೊ ಪ್ರಕರಣದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ನಾಳೆ ಬಿಡುಗಡೆಯಾಗುತ್ತಿರುವ ಹಿನ್ನಲೆ ದಾವಣಗೆರೆಯಲ್ಲಿ ಮುರುಘಾ ಮಠದ ಭಕ್ತರು ಸಂಭ್ರಮಾಚರಣೆ ನಡೆಸಿದ್ದಾರೆ, ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್ ಅವರ ನೇತೃತ್ವದಲ್ಲಿ ಅಭಿಮಾನಿಗಳು, ಬಸವಣ್ಣನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಪಟ್ಟಿದ್ದು, ದಾವಣಗೆರೆಗೆ ಮುರುಘಾ ಶರಣರನ್ನ ಬರ ಮಾಡಿಕೊಳ್ಳಲು ಭಕ್ತರು ಸಿದ್ದತೆ ನಡೆಸಿದ್ದಾರೆ..
ಈ ವೇಳೆ ಮಾತನಾಡಿದ ಶೋಷಿತ ವರ್ಗಗಳ ಅಧ್ಯಕ್ಷ ಬಾಡದ ಆನಂದರಾಜ್, ಶೋಷಿತರ ಗಟ್ಟಿ ಧ್ವನಿಯಾಗಿದ್ದ ಮುರುಘಾ ಶ್ರೀಗಳನ್ನ ಷ್ಯಡ್ಯಂತ್ರದಿಂದ ಜೈಲಿಗೆ ಕಳುಹಿಸಲಾಗಿತ್ತು, ಆದರೆ ನಾಳೆ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ, ಶ್ರೀಗಳು ಪಲಾಯನ ವಾದ ಮಾಡದೇ ಕಾನೂನಿಗೆ ಗೌರವ ಕೊಟ್ಟಿದ್ದಾರೆ, ನಾಳೆ ಬಿಡುಗಡೆಯಾಗುತ್ತಾರೆ ಎಂಬ ಮಾಹಿತಿ ಬಂದಿದೆ, ಹೀಗಾಗಿ ಸಿಹಿ ಹಂಚಿ ಸಂಭ್ರಮಪಟ್ಟಿದ್ದೇವೆ, ಚಿತ್ರದುರ್ಗದಲ್ಲಿ ವಾಸ್ತವ್ಯ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ, ಹೀಗಾಗಿ ಶ್ರೀಗಳು ದಾವಣಗೆರೆಯಲ್ಲಿ ವಾಸ್ತವ್ಯ ಮಾಡಲು ನಾವು ಸಿದ್ದತೆ ಮಾಡುತ್ತೇವೆ. ಸ್ವಾಮೀಜಿಯವರು ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂಬ ಗಟ್ಟಿ ನಂಬಿಕೆ ಇದೆ, ಮುರುಘಾ ಶ್ರೀಗಳು ಸಾಮಾಜಿಕ ಕಾರ್ಯಗಳು ಶ್ಲಾಘನೀಯ, ಶ್ರೀಗಳು ಹೊರಬಂದ ಬಳಿಕ ಸಾಮಾಜಿಕ ಕೆಲಸಗಳನ್ನ ಮುಂದುವರೆಸಲಿ ಎಂದು ತಿಳಿಸಿದ್ದಾರೆ..