POWER SAMACHARA | KANNADA NEWS | BREKING NEWS| 18-10-2023..
ದಾವಣಗೆರೆ : ಬಿಜೆಪಿಯಿಂದ ಅಧಿಕೃತವಾಗಿ ಯಾರಿಗೂ ಎಂಪಿ ಟಿಕೆಟ್ ಘೋಷಣೆ ಮಾಡಿಲ್ಲ, ಪಕ್ಷದಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಗಿಂತ ನಾನು ಸೀನಿಯರ್ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ..
ಎಂಪಿಗೆ ಸ್ಪರ್ಧಿಸೋದು ಶತ ಸಿದ್ದ..!
ಪಕ್ಷ ಬಿಟ್ಟು ಹೋಗುವವರು ಹೋಗಲಿ, ನಾನು ಮತ್ತೆ ಗೆಲ್ಲುತ್ತೇನೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದರು, ಈ ವಿಚಾರವಾಗಿ ಮಾತನಾಡಿರುವ ಎಂಪಿ ರೇಣುಕಾಚಾರ್ಯ, ಸಿದ್ದೇಶ್ವರ್ ಅವರ ಬಗ್ಗೆ ಗೌರವ ಇದೆ, ವಯಸ್ಸಿನಲ್ಲಿ ಹಿರಿಯರು, ಇವರ ತಂದೆ ಮಲ್ಲಿಕಾರ್ಜುನಪ್ಪ ಅವರ ಮೂರು ಚುನಾವಣೆ, ಸಿದ್ದೇಶ್ವರ್ ಅವರ ನಾಲ್ಕು ಚುನಾವಣೆಗಳನ್ನ ನಾನು ಮಾಡಿದ್ದೇನೆ, ಜಿಎಂ ಸಿದ್ದೇಶ್ವರ್ ಗಿಂದ ನಾನು ಸೀನಿಯರ್, ನಾನು ಎಂಪಿ ಚುನಾವಣೆಗೆ ಸ್ಪರ್ಧೆ ಮಾಡೇ ಮಾಡುತ್ತೇನೆ, ಸ್ಪರ್ಧಿಸೋದು ಶತ ಸಿದ್ದ ಎಂದು ಗುಡುಗಿದ್ದಾರೆ..
ಮುಂದಿನ ಭಾರೀ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸಿದ್ದೇಶ್ವರ್ ಹೇಳಿದ್ದರು, ಹೀಗಾಗಿ ಸುದ್ದಿಗೋಷ್ಟಿಯಲ್ಲಿ, ಪಕ್ಷ ಟಿಕೆಟ್ ಕೊಟ್ಟರೆ ನಾನು ಸ್ಪರ್ಧಿಸುತ್ತೇನೆ ನಾನೂ ಕೂಡ ಆಕಾಂಕ್ಷಿ ಎಂದು ಹೇಳಿದ್ದೆ, ಆದರೆ ಇವರು ನಾನು ಹೊನ್ನಾಳಿಗೆ ಬರುತ್ತೇನೆ, ಅಲ್ಲಿ ನಮ್ಮ ಸಂಬಂಧಿಕರಿದ್ದಾರೆ, ಹೊನ್ನಾಳಿಯಲ್ಲಿ ಸ್ಪರ್ಧಿಸುತ್ತೇನೆ ಎಂದು ಗೊಂದಲ ಸೃಷ್ಠಿಸಿದರು, ಬಹಳಷ್ಟು ಜನರನ್ನೂ ಮೂಲೆ ಗುಂಪು ಮಾಡುವ ಕೆಲಸ ಮಾಡುತ್ತಿದ್ದಾರೆ, ಎಸ್ ಎ ರವೀಂದ್ರನಾಥ್, ಮಾಡಾಳ್ ವಿರುಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನ್, ಗುರುಸಿದ್ದನಗೌಡರನ್ನ ಹೀಗೆ ಎಲ್ಲರನ್ನೂ ಮುಗಿಸಿದರು, ನಾನು ಎಂಪಿ ಟಿಕೆಟ್ ಆಕಾಂಕ್ಷಿ ಎಂದಾಕ್ಷಣ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ, ನನ್ನನ್ನೂ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ, ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಖಂಡಿಸಿದ್ದೇನೆ, ವ್ಯವಸ್ಥಿತವಾಗಿ ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಂಸದ ಜಿಎಂ ಸಿದ್ದೇಶ್ವರ್ ಮೇಲೆ ಕಿಡಿಕಾರಿದರು..
ತುಂಬಾ ಜನ ಬಿಜೆಪಿ ಬಿಡ್ತಾರೆ..!
ತುಂಬಾ ಜನ ನಾಯಕರು ಬಿಜೆಪಿ ಬಿಡ್ತಾರೆ, ನನಗೆ ಕರೆ ಮಾಡಿ ಪಕ್ಷ ಬಿಡುವ ಕುರಿತು ಮಾತನಾಡುತ್ತಿದ್ದಾರೆ, ಪಕ್ಷದಲ್ಲಿ ಸಮರ್ಥ ನಾಯಕತ್ವ ಇಲ್ಲದ್ದೆ ಇದಕ್ಕೆ ಕಾರಣ, ನಮ್ಮವರಿಗೆ ಕೂಡ ನಾನು ಬೇಡ ಅನಿಸುತ್ತೇ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ..
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ, ಹೊನ್ನಾಳಿ ನ್ಯಾಮತಿ ತಾಲ್ಲೂಕು ಬರಗಾಲ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿದ್ದೇನೆ, ಅನುದಾನ ಪೆಂಡಿಂಗ್ ಇತ್ತು, ಮರು ಚಾಲನೆ ಕೊಡುವಂತೆ ಕಾಂಗ್ರೆಸ್ ನಾಯಕರನ್ನೂ ಭೇಟಿಯಾಗಿದ್ದೇನೆ ಅಷ್ಟೆ, ತಾಲ್ಲೂಕಿನಲ್ಲಿ ನರೇಂದ್ರ ಮೋದಿ ಕರ ಪತ್ರ ಹಂಚಿದ್ದೇವೆ, ಪಕ್ಷದ ಪರವಾಗಿಯೇ ಕೆಲಸ ಮಾಡುತ್ತಿದ್ದೇವೆ, ಪಕ್ಷದ ನಾಯಕರ ಮೇಲೆ ನೋವಾಗಿದೆ, ಆರು ಸಚಿವ ಸ್ಥಾನ ಖಾಲಿ ಇದ್ದರು ಸಚಿವ ಸ್ಥಾನ ಕೊಡಲಿಲ್ಲ, ಈಗ ನೋಡಿ ಕಾಂಗ್ರೆಸ್ ನವರು ಏಕ ಕಾಲದಲ್ಲಿ ಎಲ್ಲಾ ಮಂತ್ತಿ ಸ್ಥಾನ ತುಂಬಿದರು, ರಾಜೂ ಗೌಡ ಮತ್ತು ನನಗೂ ಅನ್ಯಾಯ ಮಾಡಿದರು, ಜಿಲ್ಲೆಯಲ್ಲಿ ಎಸ್ ಎ ರವೀಂದ್ರನಾಥ್ ರಿಗೆ ಸಚಿವ ಸ್ಥಾನ ಕೊಡಬಹುದಿತ್ತು ಎಂದರು..