POWER SAMACHARA | KANNADA NEWS | BREKING NEWS| 06-10-2023..
ದಾವಣಗೆರೆ : ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂಬ ಎಸ್ ಟಿ ಸೋಮಶೇಖರ್ ಹೇಳಿಕೆಗೆ ದಾವಣಗೆರೆಯಲ್ಲಿ ಮಾಜಿ ಸಚಿವ ಸಿಟಿ ರವಿ ಟಾಂಗ್ ನೀಡಿದ್ದಾರೆ, ಅಧಿಕಾರ ಇದ್ದಾಗ ಎಸಿ ರೂಂ ನಲ್ಲಿದ್ದಂತೆ ಆಗುತ್ತೆ, ಅಧಿಕಾರ ಇಲ್ಲದಾಗ ಕೆಲವರಿಗೆ ಉಸಿರುಕಟ್ಟಿಸುವ ವಾತಾವರಣ ಇರುತ್ತೇ ಏನೂ ಮಾಡೋಕೆ ಆಗಲ್ಲ ಎಂದು ಕಿಡಿಕಾರಿದ್ದಾರೆ..
ನಾವು ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ರಾಜಕಾರಣ ಮಾಡುತ್ತಿರುವವರು, ಅಧಿಕಾರ ಇಲ್ಲದಾಗ ಕೆಲವರು ವಿಲ ವಿಲ ಒದ್ದಾಡುತ್ತಾರೆ, ಉಸಿರುಕಟ್ಟಿಸುವ ವಾತಾವರಣ ಇರುತ್ತದೆ, ನಾವು ಅಧಿಕಾರ ಇದ್ದಾಗಲು ಇಲ್ಲದಾಗಲು ವಿಚಾರ ಬಿಟ್ಟು ರಾಜಕಾರಣ ಮಾಡೋಲ್ಲ ಎಂದಿದ್ದಾರೆ..
ಶಿವಮೊಗ್ಗ ರಾಗಿಗುಡ್ಡ ಗಲಭೆ ಪ್ರಕರಣ ಸಂಬಂಧ ಮಾತನಾಡಿದ ಸಿಟಿ ರವಿ, ಶಿವಮೊಗ್ಗ ಪ್ರಕರಣ ಒಂದು ಮಾರ್ಜಾಲ ನ್ಯಾಯದ ರೀತಿ ಕಾಂಗ್ರೆಸ್ ವರ್ತನೆ ಮಾಡುತ್ತಿದೆ, ಕಳ್ಳ ಬೆಕ್ಕಿಗೆ ಬೆಣ್ಣೆ ಹಂಚಲು ಕೊಟ್ಟಂತೆ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಂತೆ ಆಗಿದೆ, ಮತಾಂದ ರೀತಿ ವರ್ತನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು, ಆದರೆ ದೌರ್ಜುನ್ಯಕ್ಕೊಳಗಾದವರ ಮೇಲೆ ಕ್ರಮ ಕೈಗೊಂಡಿದೆ, ಅವರಿಗು ಸರಿ ಮಾಡಿದಿನಿ, ಇವರಿಗು ಸರಿ ಮಾಡಿದಿನಿ ಎನ್ನುವಂತೆ ಮಾಡಿದ್ದಾರೆ, ಗಲಭೆ ಪ್ರಕರಣವನ್ನು ಕಾಂಗ್ರೆಸ್ ನವರು ಮಾರ್ಜಾಲ ನ್ಯಾಯ ಮಾಡಿದ್ದಾರೆ, ಟಿಪ್ಪು, ಔರಂಗಜೇಬ್ ಕಟೌಟ್ ಹಾಕೋದಕ್ಕೆ ಅವಕಾಶ ಕೊಟ್ಟಿದ್ದೇ ಮೊದಲ ತಪ್ಪು, ಔರಂಗಜೇಬ್ ಒಬ್ಬ ಮತಾಂದ ಗುರುತೇಜ ಬಹದ್ದೂರ, ಜೋಜವರ್ ಸಿಂಗ್ ಮತಿದಾಸ್ ಸೇರಿದಂತೆ ಹಲವರನ್ನು ಚಿತ್ರಹಿಂಸೆ ಮಾಡಿ ಕೊಂದವನು, ಲಕ್ಷಾಂತರ ಜನರ ಮತಪರಿವರ್ತನೆ ಮಾಡಿದ ಮತಾಂದ ಅಂತವರ ಭಾವಚಿತ್ರಕ್ಕೆ ಅವಕಾಶ ಮಾಡಿಕೊಡಲಾಗಿದೆ, ಸಚಿವರುಗಳು ತಲೆಕೆಟ್ಟವರಂತೆ ಮಾತನಾಡಬಾರದು ಎಂದರು..
ಕಾಂಗ್ರೆಸ್ ನವರು ನಿಜವಾದ ಹಿಂದುಗಳು ಎಂಬ ಹೇಳಿಕೆ ವಿಚಾರ, ಹೌದು ಕಾಂಗ್ರೆಸ್ ನವರು ನಿಜವಾದ ಹಿಂದುಗಳು ಆದರೆ ಅವರು ತಿಲಕ ಇಡೋಲ್ಲ, ಕೇಸರಿ ಪೇಟಾ ವಿರೋಧ ಮಾಡ್ತಾರೆ, ಆದರೆ ಮುಸ್ಲಿಂರ ಟೋಪಿಯನ್ನು ಆನಂದವಾಗಿ ಹಾಕಿಕೊಳ್ಳುತ್ತಾರೆ, ಏಕೆಂದರೆ ಅವರು ಅಸಲಿ ಹಿಂದುಗಳಲ್ವ ಅದಕ್ಕೆ ಆ ರೀತಿ ಮಾಡ್ತಾರೆ, ನಾವು ನಕಲಿಗಳಲ್ಲ, ಅದಕ್ಕೆ ತಿಲಕ ಇಟ್ಟುಕೋತಿವಿ..ಕೇಸರಿ ಹಾಕೋತಿವಿ. ಭಾರತ್ ಮಾತಾಕಿ ಜೈ ಅಂತಿವೆ, ಅಸಲಿಗಳಿಗೆ ಟಿಪ್ಪು ಸುಲ್ತಾನ್, ಔರಂಗಜೇಬ್ ಅಂದರೆ ಪ್ರೀತಿ, ನಾಳೆ ಒಸಮ್ ಬಿನ್ ಲಾಡೆನ್ ಅಂದರು ಕಾಂಗ್ರೆಸ್ ನವರಿಗೆ ಪ್ರೀತಿ ಉಕ್ಕುತ್ತಿ ಎಂದರು..
ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿದ ಅವರು, ಪಾರ್ಟಿ ಏನ್ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧ, ಕೆಲವರು ಪರ್ಸನಲ್ ಅಜೆಂಡ್ ದಿಂದ ವಿರೋಧ ಮಾಡುತ್ತಿದ್ದಾರೆ, ನಾವು ಪರಸನಲ್ ಅಜೆಂಡ್ ಜೊತೆ ಇಲ್ಲ, ಪಾರ್ಟಿ ಅಜೆಂಡ್ ಜೊತೆ ಇದ್ದೆವು, ನಾವು ವೈಯಕ್ತಿಕ ಲಾಭ ನಷ್ಟದ ಜೊತೆ ರಾಜಕೀಯ ಮಾಡಿಕೊಂಡು ಬಂದಿಲ್ಲ, ಕೇವಲ ಪಾರ್ಟಿ ಏನೋ ಹೇಳುತ್ತೋ ಅದನ್ನು ಕೇಳುತ್ತೇವೆ ಎಂದ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಈಗ ಹೇಳೋ ವಿಚಾರ ಅಲ್ಲ ಎಂದು ಹೇಳಿದರು..