POWER SAMACHARA | KANNADA NEWS | BREKING NEWS| 15-09-2023..
ದಾವಣಗೆರೆ: ಈ ಮಹಿಳೆಯ ಸಾಧನೆ ಕೇಳಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ, ಸ್ವತಃ ಪರಿಶ್ರಮದಿಂದ ಕೊಟ್ಟಿಗೆ ನಿರ್ಮಿಸಿ ಹಸು ಸಾಕಿ ದಾವಣಗೆರೆ ಜಿಲ್ಲೆಯಲ್ಲೇ ಅತೀ ಹೆಚ್ಚು ಲೀಟರ್ ಹಾಲು ಮಾರಾಟ ಮಾಡಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ದಾವಣಗೆರೆ ಸಮೀಪದ ದೊಗ್ಗಳ್ಳಿ ಬಳಿ ಕಮಲಾ ಶ್ರೀಕರ್ ಅವರು ಹೈಟೆಕ್ ಗೋವು ಸಾಕಾಣಿಕೆ ಮಾಡಿದ್ದಾರೆ..
ಹರಿಹರ ತಾಲೂಕು ದೊಗ್ಗಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಮಲಾ ಶ್ರೀಕರ್ ಅವರು ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ್ದಕ್ಕಾಗಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪಶಸ್ತಿ ಲಭಿಸಿದೆ. ಒಕ್ಕೂಟದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕಮಲಾ ಅವರು ಸತತ 2ನೇ ಬಾರಿಗೆ ಈ ಪ್ರಶಸ್ತಿ ಪಡೆದಿದ್ದಾರೆ..ಈ ಸಂದರ್ಭದಲ್ಲಿ ಶಿಮುಲ್ ಅಧ್ಯಕ್ಷ ಎನ್.ಎಚ್. ಶ್ರೀಪಾದರಾವ್, ನಿರ್ದೇಶಕ ಜಗದೀಶಪ್ಪ ಬಣಕಾರ್, ವ್ಯವಸ್ಥಾಪಕ ನಿರ್ದೇಶಕ ತಿಪ್ಪೇಸ್ವಾಮಿ ಇದ್ದರು.