POWER SAMACHARA | KANNADA NEWS | BREKING NEWS| 19-08-2023..
ದಾವಣಗೆರೆ : ಅವರಿಬ್ಬರು ತಮ್ಮ ಮಗುವಿನೊಂದಿಗೆ ವಿದೇಶದಲ್ಲಿ ದುಡಿದು ದೊಡ್ಡ ಹೆಸರು ಮಾಡಬೇಕು ಎಂದು ಹೋದವರು, ಎಂಜಿನಿಯರ್ ವೃತ್ತಿ ಮಾಡುತ್ತಾ ಸುಂದರ ಸಂಸಾರ ಸಾಗಿಸುತ್ತಿದ್ದರು, ಆದರೆ ಆನಂದದಲ್ಲಿದ್ದ ಕುಟುಂಬದಲ್ಲಿ ಅದೇನಾಯ್ತು ಗೊತ್ತಿಲ್ಲ, ಮಗುವಿನ ಸಮೇತ ದಂಪತಿಗಳು ಸಾವಿಗೀಡಾಗಿದ್ದಾರೆ..
ಅಮೆರಿಕ ಸ್ಥಳಿಯ ಮಾಧ್ಯಮ ವರದಿ..
ಹೌದು.. ಅವರಿಬ್ಬರೂ ವೃತ್ತಿಯಲ್ಲಿ ಎಂಜಿನಿಯರ್, ಇಬ್ಬರಿಗೂ ಮದುವೆ ಆಗಿ 9 ವರ್ಷಗಳೇ ಕಳೆದಿವೆ, ಇಬ್ಬರ ದಾಂಪತ್ಯ ಜೀವನಕ್ಕೆ ಮುದ್ದಾದ ಗಂಡು ಮಗುವೊಂದು ಸಾಕ್ಷಿಯಾಗಿದೆ, ಮದುವೆ ಆದಾಗಿನಿಂದ ಅಮೇರಿಕಾದಲ್ಲೆ ವಾಸವಾಗಿದ್ದರು, ಅಲ್ಲೇ ಸ್ವಂತ ಮನೆಯೊಂದನ್ನು ಸಹ ಹೊಂದಿದ್ದರು, ಆದರೆ ಕಳೆದ ಎರಡು ದಿನಗಳ ಹಿಂದೆ ಆ ದಂಪತಿಗಳಿಬ್ಬರೂ ಪುಟ್ಟ ಮಗುವಿನ ಸಮೇತ ಶವವಾಗಿ ಪತ್ತೆಯಾಗಿದ್ದಾರೆ, ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಈ ಘಟನೆ ನಡೆದಿದ್ದು, ಸಾವಿನ ಕುರಿತು ಸ್ಥಳಿಯ ಮಾಧ್ಯಮ ಹಾಗೂ ಬಾಲ್ಟಿಮೋರ್ ಪೊಲೀಸರು ಖಚಿತಪಡಿಸಿದ್ದಾರೆ ಎನ್ನಲಾಗಿದೆ.
37 ವರ್ಷದ ಯೋಗೇಶ್ ಹೊನ್ನಾಳ,35 ವರ್ಷದ ಪ್ರತಿಭಾ ಹೊನ್ನಾಳ್, 6 ವರ್ಷದ ಯಶ್ ಹೊನ್ನಾಳ್ ಬಾಲ್ಟಿಮೋರ್ ನಗರದಲ್ಲಿರುವ ತಮ್ಮ ಸ್ವಂತ ಮನೆಯಲ್ಲೆ ಶವವಾಗಿ ಪತ್ತೆಯಾಗಿದ್ದಾರೆ..
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ..
ಮೃತಪಟ್ಟ ಯೋಗೇಶ್ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದವರು, ಎಂಜಿನಿಯರ್ ಪದವಿದರ, ಪತ್ನಿ ಪ್ರತಿಭಾ ಮೂಲತಃ ಬೆಂಗಳೂರಿನವರು ಇಬ್ಬರಿಗೂ ಮದುವೆ ಆಗಿ 9 ವರ್ಷವಾಗಿದೆ, ಜೊತೆಗೆ ಯಶ್ ಅನ್ನೋ 6 ವರ್ಷದ ಗಂಡು ಮಗು ಸಹ ಇತ್ತು, ಇಬ್ಬರ ಬದುಕು ಚೆನ್ನಾಗಿ ಇತ್ತಂತೆ, ಆದರೆ ಕಳೆದ ಎರಡು ದಿನಗಳಿಂದ ದಂಪತಿಗಳು ಯಾರು ಮನೆಯಿಂದ ಹೊರಗೆ ಬಾರದೆ ಇರುವುದನ್ನು ಗಮನಿಸಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಈ ವೇಳೆ ಪೊಲೀಸರು ಯೋಗಕ್ಷೇಮ ವಿಚಾರಣೆಗೆ ಕರೆ ಮಾಡಿದ್ದಾರೆ, ಅಲ್ಲದೆ ಮನೆ ಬಳಿ ಬಂದು ಗಮನಿಸಿದಾಗ ಮೂವರು ಮೃತಪಟ್ಟಿದ್ದು ಗೊತ್ತಾಗಿದೆ, ತಕ್ಷಣ ಬೆಂಗಳೂರಿನಲ್ಲಿ ಇದ್ದ ಯೋಗೇಶ್ ಸಹೋದರನಿಗೆ ಫೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ, ತಕ್ಷಣ ದಾವಣಗೆರೆ ನಗರದ ವಿದ್ಯಾನಗರದಲ್ಲಿ ವಾಸವಾಗಿರುವ ಯೋಗೇಶ್ ತಾಯಿ ಶೋಭಾ ಮತ್ತು ಪ್ರತಿಭಾಳ ತಂದೆ ಅಮರ್ ನಾಥ್ ಗೆ ವಿಷಯ ಮುಟ್ಟಿಸಿದ್ದಾರೆ, ಮಕ್ಕಳ ಸಾವಿನ ವಿಷಯ ಕಿವಿಗೆ ಬೀಳುತ್ತಿದ್ದಂತೆ ಮೃತರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ, ಇನ್ನೂ ಮೃತ ಯೋಗೇಶ್ ತಾಯಿ ಶೋಭಾ ತಮ್ಮ ಮಗ ಸೊಸೆ ಸಾವಿನ ತನಿಖೆ ಮಾಡಿ ಸತ್ಯಾಸತ್ಯತೆ ತಿಳಿಸುವಂತೆ ಮತ್ತು ಮೃತದೇಹಗಳನ್ನು ಭಾರತಕ್ಕೆ ತರಿಸಿಕೊಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಮನವಿ ಮಾಡಿಕೊಂಡಿದ್ದಾರೆ..
ಸರ್ಕಾರದ ನೆರವು ಕೋರಿದ ಕುಟುಂಬ..