POWER SAMACHARA | KANNADA NEWS | BREKING NEWS| 05-06-2023
ದಾವಣಗೆರೆ; ಬೆಣ್ಣೆನಗರಿ ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಜನರಿಗೆ ಮತ್ತಷ್ಟು ಗುಡ್ ನ್ಯೂಸ್ ಕೊಟ್ಟಿದ್ದಾರೆ, ಜುಲೈ 7ನೇ ತಾರೀಕ್ ಬಜೆಟ್ ಅಧಿವೇಶನ ನಡೆಯಲಿದೆ, ಈಗಾಗಲೇ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದ್ದೇವೆ, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲಾ ಯೋಜನೆಗಳನ್ನ ಬಜೆಟ್ ನಲ್ಲಿ ಜಾರಿ ಮಾಡುತ್ತೇವೆ ಎನ್ನುವುದರ ಮೂಲಕ ಮತ್ತಷ್ಟು ಭರಪೂರ ಕೊಡುಗೆ ಕೊಡಲು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ..
ಒಂದು ವಾರ ರಾಜ್ಯಪಾಲರ ಭಾಷಣ ಇರುತ್ತೆ, ನಂತರ ಬಜೆಟ್ ನಡೆಯಲಿದೆ, ಬಜೆಟ್ ಗಾತ್ರ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ಬಜೆಟ್ ಪ್ರಿಪರೇಷನ್ ಇನ್ನೂ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ಮಳೆಗಾಲ ಪ್ರಾರಂಭ ಆಗುತ್ತದೆ, ಅತೀವೃಷ್ಠಿ ಆದರೆ ಮುಂಜಾಗ್ರತ ಕ್ರಮವಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ, ವಿದ್ಯುತ್ ದರ ಜಾಸ್ತಿ ನಾವು ಮಾಡಿದ್ದಲ್ಲ, ಆರಿಶಿ ಅವರು ತೀರ್ಮಾನ ಮಾಡಿದ್ದಾರೆ, ಇಂದಿರಾ ಕ್ಯಾಂಟಿನ್ ಪ್ರಾರಂಭಕ್ಕೆ ಸಿದ್ದತೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಗೋ ಹತ್ಯೆ ನಿಷೇಧ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ, 1964 ಆಕ್ಟ್ ನಲ್ಲಿ ಹೇಳಲಾಗಿದೆ, 12 ವರ್ಷ ತುಂಬಿದ ರಾಸುಗಳು, ಬರಡು ರಾಸುಗಳು, ವ್ಯವಸಾಯಕ್ಕೆ ಉಪಯೋಗವಿಲ್ಲದ ರಾಸುಗಳು ಮುಕ್ತಕ್ಕೆ ಅವಕಾಶ ಇದೆ, ಈ ಬಗ್ಗೆ ತಿದ್ದುಪಡಿಗಳು ನಡೆದಿವೆ, ಕಾಯ್ದೆ ವಾಪಾಸ್ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ನನ್ನ ಅಮೃತ ಮಹೋತ್ಸವ ಕಾರ್ಯಕ್ರಮ ದಾವಣಗೆರೆಯಲ್ಲಿ ಆಗಿದೆ, ಕಾಕತಾಳೀಯ ಎಂಬಂತೆ ಸಿಎಂ ಆದ ಬಳಿಕ ಮೊದಲ ಭಾರೀಗೆ ಇದೇ ಜಿಲ್ಲೆಯೊಂದಕ್ಕೆ ಬಂದಿದ್ದೇನೆ, ದಾವಣಗೆರೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಮುಂದೆ ತಿಳಿಸುತ್ತೇನೆ ಎಂದರು..