POWER SAMACHARA | KANNADA NEWS | BREKING NEWS| 19-06-2023..

ದಾವಣಗೆರೆ: ಎಮ್ಮೆ ಜೊತೆ ಸೇರಲು ಅಡ್ಡಿಪಡಿಸುತ್ತಿದ್ದಾನೆ ಎಂದು ಕೋಣವೊಂದು ವ್ಯಕ್ತಿಯನ್ನ ಹಿರಿದು ಕೊಂದು ಹಾಕಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಎನ್ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ..

ಎಮ್ಮೆ ಜೊತೆ ಸೇರಲು ಬಿಡುತ್ತಿಲ್ಲ ಅಂತ ವ್ಯಕ್ತಿಯನ್ನ ಕೊಂಬಿನಿಂದ ಗುದ್ದಿ ಗುದ್ದಿ ಕೊಂದು ಹಾಕಿದೆ, ಎನ್ ಬಸವನಹಳ್ಳಿ ಗ್ರಾಮದ ನೀರಗಂಟಿ ಜಯಣ್ಣ (48) ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ, ಲಿಂಗದಹಳ್ಳಿ ಗ್ರಾಮದ ದೇವರಿಗೆ ಬಿಟ್ಟ ಕೋಣ ಇದಾಗಿದ್ದು, ಪಕ್ಕದ ಬಸವನಹಳ್ಳಿಯಲ್ಲಿ ಸಾಕಷ್ಟು ದಾಂದಲೆ ಮಾಡುತಿತ್ತು, ಬಸವನಹಳ್ಳಿ ಎಮ್ಮೆಗಳ ಜೊತೆ ಸೇರಿ ದಾಂದಲೆ ಮಾಡುತ್ತಿತ್ತು, ಎಮ್ಮೆಗಳ ಜೊತೆ ಸೇರಲು ಬಂದಾಗ ಜಯಣ್ಣ ದೊಣ್ಣೆಯಿಂದ ಹೊಡೆದು ಓಡಿಸುತ್ತಿದ್ದ, ಎಮ್ಮೆ ಜೊತೆ ಸೇರಲು ಬಿಡದ ಜಯಣ್ಣನ ಮೇಲೆ ಕೋಣ ದ್ವೇಷ ಸಾಧಿಸುತ್ತಿತ್ತು, ಈ ಹಿಂದೆ ಸಾಕಷ್ಟು ಬಾರಿ ಜಯಣ್ಣನ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ, ಅದೃಷ್ಟವಶಾತ್ ಹಿಂದಿನ ದಾಳಿಯಲ್ಲಿ ಪಾರಾಗಿದ್ದ, ಭಾನುವಾರ ಸಂಜೆ ಯಾರು ಇಲ್ಲದ್ದನ್ನು ನೋಡಿ ಜಯಣ್ಣನ ಮೇಲೆ ಕೋಣ ದಾಳಿ ಮಾಡಿ ಮನಸೋ ಇಚ್ಚೆ ತಿವಿದಿದೆ, ಗಂಭೀರ ಗಾಯಗೊಂಡಿದ್ದ ಜಯಣ್ಣ ಸಾವನ್ನಪ್ಪಿದ್ದಾರೆ..

ಠಾಣೆ ತನಕ ಹೋಗಿದ್ದ ರಕ್ಕಸ ಕೋಣನ ದೂರು..!

ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಕೋಣವನ್ನ ಗ್ರಾಮದ ದೇವರಿಗೆ ಬಿಡಲಾಗಿತ್ತು, ಪಕ್ಕದ ಹಳ್ಳಿ ಎನ್ ಬಸವನಹಳ್ಳಿಗೆ ಹೋಗಿ ದಾಂಧಲೆ ಮಾಡುತ್ತಿತ್ತು, ಇದರ ಬಗ್ಗೆ ಲಿಂಗದಹಳ್ಳಿ ಗ್ರಾಮ ಪಂಚಾಯತ್ ಗೆ, ಪೊಲೀಸ್ ಠಾಣೆಯಲ್ಲೂ ಕೂಡ ದೂರು ದಾಖಲಾಗಿತ್ತು ಎನ್ನಲಾಗಿದೆ, ಆದರೆ ಇದರ ಬಗ್ಗೆ ಅಧಿಕಾರಿಗಳು ಲಿಂಗದಹಳ್ಳಿ ಗ್ರಾಮಸ್ಥರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಆದರೆ ಕೋಣದ ಹಳೆ ದ್ವೇಷಕ್ಕೆ ವ್ಯಕ್ತಿ ಬಲಿಯಾಗಿದ್ದು ಕುಟುಂಬಸ್ಥರ ಅಕ್ರದನ ಮುಗಿಲು ಮುಟ್ಟಿದೆ..