<strong>POWER SAMACHARA | KANNADA NEWS | BREKING NEWS| 10-01-2024</strong> <strong>ದಾವಣಗೆರೆ:</strong> ನಮ್ಮಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ, ಆದರೆ ಸರ್ಕಾರಿ ಕೆಲಸವನ್ನ ದೇವರೇ ಮೆಚ್ಚಬೇಕು, ಅಷ್ಟರ ಮಟ್ಟಿಗೆ ನಿರ್ಲಕ್ಷ್ಯ ತೋರುತ್ತಾರೆ, ಅಧಿಕಾರಿಗಳು, ಸಿಬ್ಬಂದಿಗಳು. ಇಲ್ಲೊಂದು ಊರಲ್ಲಿ ಕಾಲಿಲ್ಲದ ಅಜ್ಜಿ ತನ್ನ ಮಾಸಾಶನಕ್ಕೆ ಎರಡ್ಮೂರು ಕಿಲೋ ಮೀಟರ್ ತೆವಳಿಕೊಂಡೇ ಬಂದಿದ್ದು ದೃಶ್ಯ ಮನ ಕಲಕುವಂತಿದ್ದು ಇಡೀ ವ್ಯವಸ್ಥೆಗೆ ಅಜ್ಜಿ ಹಿಡಿಶಾಪ ಹಾಕಿದ್ದಾರೆ.. ಅಜ್ಜಿಯ ಮನ ಮಿಡಿಯುವ ಸ್ಟೋರಿ ಇಲ್ಲಿದೆ ನೋಡಿ.. <img class="aligncenter wp-image-2794 size-full" src="https://powersamachara.com/wp-content/uploads/2024/01/ajji-paradata-1.jpg" alt="" width="750" height="550" /> ಹೌದು.. ಮಾಸಾಶನಕ್ಕಾಗಿ ತೆವಳಿಕೊಂಡು ಬರುತ್ತಿರುವ ವೃದ್ದೆಯ ಸ್ಥಿತಿ ನೋಡಿದ್ರೆ ಎಂಥವರ ಕಣ್ಣಲ್ಲಿ ನೀರು ಬಾರದೇ ಇರಲಾರದು. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕುಣೆಬೆಳಕೆರೆ ಗ್ರಾಮದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದ್ದು, ಅಜ್ಜಿಯ ಸ್ಥಿತಿಯನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ, ಈ ವಿಡಿಯೋ ಸಾಕಷ್ಟು ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಅಕ್ರೋಶಕ್ಕೆ ಕಾರಣವಾಗಿದೆ.. ಹರಿಹರ ತಾಲೂಕಿನ ನಂದಿತಾವರೆಯ ಗಿರಿಜಮ್ಮ ತನಗೆ ಬರಬೇಕಿದ್ದ ಮಾಸಾಶನಕ್ಕಾಗಿ ಪರದಾಡುತ್ತಿದ್ದು, ಎರಡು ತಿಂಗಳಿನಿಂದ ಮಾಸಾಶನ ಬಾರದ ಹಿನ್ನಲೆ ಆಕೆಗೆ ಜೀವನ ನಡೆಸುವುದೇ ಕಷ್ಟವಾಗಿತ್ತು.. ಅದ್ದರಿಂದ ವೃದ್ದೆ ಗಿರಿಜಮ್ಮ ನಂದಿತಾವರೆಯಿಂದ ತೆವಳಿಕೊಂಡು ಕುಣೆಬೆಳಕೆರೆ ಗ್ರಾಮಕ್ಕೆ ಬಂದಿದ್ದಾರೆ. ಇನ್ನು ಕುಣೆಬೆಳಕೆರೆ ಪೋಸ್ಟ್ ಆಫೀಸ್ ನಿಂದ ಅಜ್ಜಿಗೆ ತಿಂಗಳ ಮಾಸಾಶನ ಸಿಗ್ತಿತ್ತು, ಕೆಲ ಕಾರಣಗಳಿಂದ ಎರಡು ತಿಂಗಳ ಮಾಸಾಶನದ ಹಣ ಅಜ್ಜಿಗೆ ತಲುಪಿಲ್ಲ, ಮಕ್ಕಳು ಯಾರು ಇಲ್ಲದೆ ಇರೋದ್ರಿಂದ ಜೀವನಕ್ಕೆ ಆ ಹಣ ಆಧಾರವಾಗಿತ್ತು. ಆದರೆ ಎರಡು ತಿಂಗಳಿನಿಂದ ಹಣ ಬಾರದೆ ಜೀವನ ನಡೆಸುವುದು ಕಷ್ಟವಾಗಿತ್ತು. ಇದರಿಂದ ಮಾಸಾಶನ ಹಣ ಬಂದಿಲ್ಲ ಎಂದು ಸಂಬಂಧಪಟ್ಟ ಪೋಸ್ಟ್ ಮ್ಯಾನ್ ಗೆ ಕೇಳಿದರೆ 2 ತಿಂಗಳಿಂದ ಹಣ ಬಂದಿಲ್ಲ ಎಂಬ ಸಬೂಬು ಹೇಳಿದ್ದಾನೆ. ಜೀವನಕ್ಕೆ ಆಧಾರವಾಗಿದ್ದ ಮಾಸಾಶನ ಬಂದಿದೆಯಾ ಎಂದು ವೃದ್ಧೆ ಗಿರಿಜಮ್ಮ ಸತತ 2 ಕಿಲೋ ಮೀಟರ್ ತೆವಳಿಕೊಂಡು ಕುಣಿಬೆಳೆಕೆರೆ ಗ್ರಾಮ ಪೋಸ್ಟ್ ಆಫೀಸ್ ಗೆ ಬಂದ ವೃದ್ದೆಯನ್ನು ಸ್ಥಳೀಯರು ಯಾವುದೋ ಭಿಕ್ಷುಕ ಅಜ್ಜಿ ಎಂದು ನಿರ್ಲಕ್ಷಿಸಿದ್ದರು, ಇನ್ನು ವೃದ್ಧೆ ಗಿರಿಜಮ್ಮನ ಪತಿ ಕಳೆದ 9ತಿಂಗಳ ಹಿಂದೆ ಸಾವನ್ನಪ್ಪಿದ್ದಾನೆ, ಆಗಿನಿಂದ ವೃದ್ದೆಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಅಲ್ಲದೆ ಕಳೆದ ಎರಡು ತಿಂಗಳಿನಿಂದ ವೃದ್ಧಾಪ್ಯ ವೇತನ ಬಂದಿಲ್ಲ. ಕುಣೆಬೆಳಕೆರೆ ಅಂಚೆ ಕಚೇರಿಯ ಸಿಬ್ಬಂದಿ ಕೂಡ ನಿರ್ಲಕ್ಷ್ಯ ತೋರಿದ್ದಾರೆ, ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ವೃದ್ದೆ ಗಿರಿಜಮ್ಮನಿಗೆ ಸಾಕಷ್ಟು ಕಷ್ಟವಾಗಿದ್ದು. ಇದರಿಂದ ನಂದಿತಾವರೆ ಗ್ರಾಮದಿಂದ ಕುಣೆಬೆಳಕೆರೆ ಗ್ರಾಮದವರೆಗೂ ವೃದ್ದೆ ತೆವಳುತ್ತಾ ಹೋಗಿದ್ದು, ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇನ್ನು ಸರಿಯಾಗಿ ಮಾಸಾಶನ ನೀಡದ ಅಂಚೆ ಕಚೇರಿ ಸಿಬ್ಬಂದಿ ವಿರುದ್ದ ಹಿಡಿಶಾಪ ಹಾಕಿದರು. ಅಲ್ಲದೆ ವೃದ್ದೆಯನ್ನು ಸ್ಥಳೀಯರು ಹರಿಹರ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಂಚೆ ಕಚೇರಿ ಸಿಬ್ಬಂದಿಯ ವಿರುದ್ದ ಕ್ರಮಕ್ಕೆ ಸಾರ್ವಜನಿಕರು ಅಗ್ರಹಿಸಿದ್ದರಿಂದ ಉಪ ತಹಶೀಲ್ದಾರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ವೃದ್ದೆಗೆ ಜೀವನಕ್ಕಾಗಿ ದಾರಿ ಮಾಡಲು ಸೂಚಿಸಿದ್ದಾರೆ, ಇತ್ತ ಮಾಸಾಶನ ಸರಿಯಾಗಿ ನೀಡದ ಆಡಳಿತದ ವಿರುದ್ದ ಅಜ್ಜಿ ಹಿಡಿಶಾಪ ಹಾಕಿದ್ದಾರೆ.. <img class="aligncenter wp-image-2795 size-full" src="https://powersamachara.com/wp-content/uploads/2024/01/ajji-paradata-2.jpg" alt="" width="750" height="550" /> ಒಟ್ಟಾರೆಯಾಗಿ ಈ ಅಜ್ಜಿಯ ಸಮಸ್ಯೆ ಒಂದೇ ಅಲ್ಲ, ಬಹುತೇಕ ಕಡೇಗಳಲ್ಲಿ ಸರ್ಕಾರಿ ಯೋಜನೆ ಹಣ ಪಡೆಯಲು ಜೀವವನ್ನೇ ಪಣಕ್ಕೆ ಇಡಬೇಕಾದ ಸನ್ನಿವೇಶ ಜನರದ್ದಾಗಿದೆ, ಅಂಚೆ ಕಚೇರಿಯ ಸಿಬ್ಬಂದಿಯ ವಿರುದ್ದ ಸಾರ್ವಜನಿಕ ವಲಯದಲ್ಲಿ ಅಕ್ರೋಶಕ್ಕೆ ಕಾರಣವಾಗಿದ್ದು, ತಾಂತ್ರಿಕ ಕಾರಣದಿಂದ ವೃದ್ದೆಗೆ ಮಸಾಶನ ಬಂದಿಲ್ಲ ಎನ್ನಲಾಗಿದೆ, ಅದನ್ನು ಸರಿಪಡಿಸಿ ಅ ವೃದ್ದೆಯ ಜೀವನ ನಡೆಸಲು ಅನುವು ಮಾಡಿಕೊಡಬೇಕಿದೆ. ಮುಂದೆ ಈ ರೀತಿಯಾಗಿ ಮತ್ತೆ ಯಾರಿಗೂ ಕೂಡ ಈ ಸ್ಥಿತಿ ಬಾರದಂತೆ ಮುಂಜಾಗ್ರತೆ ವಹಿಸಿ ಎನ್ನಬಹುದು ನಮ್ಮ ಕಳಕಳಿಯಾಗಿದೆ...