POWER SAMACHARA | KANNADA NEWS | BREKING NEWS| 14-06-2023

ದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡಿದೆ ಎಂಬ ಆರೋಪಗಳ ನಡುವೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆಯ ಖಾಸಗಿ ಹೊಟೆಲ್ ಒಂದರಲ್ಲಿ ರಹಸ್ಯ ಮಾತುಕತೆ ನಡೆಸಿರೋದು ಚರ್ಚೆಗೆ ಗ್ರಾಸವಾಗಿದೆ..

ದಾವಣಗೆರೆ ನಗರದ ರೆಸಾರ್ಟ್ ಒಂದರಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ-ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಗುಪ್ತ ಮೀಟಿಂಗ್ ನಡೆಸಿದ್ದಾರೆ, ರೆಸಾರ್ಟ್ ನಲ್ಲಿ ಬಾಗಿಲು ಹಾಕಿಕೊಂಡು ಸುಮಾರು 25 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ, ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂಬ ಚರ್ಚೆ ಬೆನ್ನಲೆ ಸಿಕ್ರೇಟ್ ಮಿಟಿಂಗ್ ಸಂಚಲನಕ್ಕೆ ಕಾರಣವಾಗಿದೆ..

ನಿನ್ನೆ ದಾವಣಗೆರೆ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ ನಡೆದಿತ್ತು, ಸಭೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿ ಪಕ್ಷ ಸೋಲಿಸಿದ್ದೀರಿ ಅಂತ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿತ್ತು, ಮಧ್ಯಾಹ್ನ ಕೋರ್ ಕಮೀಟಿಯಲ್ಲಿ ವಾಗ್ವಾದ ಆದ ಬೆನ್ನಲೆ ಸಾಯಂಕಾಲ ಮಾಜಿ ಸಿಎಂ ಬೊಮ್ಮಾಯಿ- ಶಾಮನೂರು ಭೇಟಿಯಾಗಿದ್ದಾರೆ, ಈ ರೀತಿಯಾದ ಹೊಂದಾಣಿಕೆ ಮಾಡಿಕೊಂಡೆ ಪಕ್ಷ ಸೋಲಿಗೆ ಕಾರಣವಾಗಿದ್ದಾರೆ ಅಂತ ಕಾರ್ಯಕರ್ತರು ಆರೋಪ ಮಾಡ್ತಿದ್ದಾರೆ..

ಎಸ್ ಎಸ್ ಮಲ್ಲಿಕಾರ್ಜುನ್ ಪ್ರಕರಣದಲ್ಲಿ ಸಿಎಂ ಮೌನ..?!

ಈ ಹಿಂದೆ ಈಗಿನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಮೇಲೆ ದಾವಣಗೆರೆಯಲ್ಲಿ ಪ್ರಕರಣ ದಾಖಲಾಗಿತ್ತು, ಫಾರಂ ಹೌಸ್ ನಲ್ಲಿ ವನ್ಯ ಜೀವಿಗಳನ್ನು ಸಾಕಿದ್ದಾರೆ ಎಂದು ದೂರು ದಾಖಲಾಗಿತ್ತು, ದೂರು ದಾಖಲಾದ ಬಳಿಕ ಅರಣ್ಯ ಇಲಾಖೆ ಜಿಂಕೆಗಳನ್ನ ಮೃಗಾಲಯಕ್ಕೆ ಬಿಟ್ಟಿದ್ದರು, ಈ ಸಂಬಂಧ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಬಂಧನಕ್ಕೆ ಆಗ್ರಹಿಸಿ ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತ್ತು, ಅಷ್ಟೆ ಅಲ್ಲದೇ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಜಿಲ್ಲಾ ಬಿಜೆಪಿ ನಿಯೋಗ ತೆರಳಿ ಮನವಿ ಸಲ್ಲಿಸಿ ಎಸ್ ಎಸ್ ಮಲ್ಲಿಕಾರ್ಜುನ್ ಬಂಧನಕ್ಕೆ ಆಗ್ರಹಿಸಿತ್ತು, ಇಷ್ಟೆಲ್ಲ ಹೋರಾಟಗಳು ನಡೆದರು, ಎಸ್ ಎಸ್ ಮಲ್ಲಿಕಾರ್ಜುನ್ ಅವರು ಬಂಧನವಾಗಿರಲಿಲ್ಲ, ಈ ಸಮಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮೌನ ವಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಸಂಬಂಧಿಕರು ಆಗಿರುವ ಶಾಮನೂರು ಶಿವಶಂಕರಪ್ಪ, ಬಸವರಾಜ್ ಬೊಮ್ಮಾಯಿ ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಒಳಗೊಳಗೆ ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದಾರೆ..