POWER SAMACHARA | KANNADA NEWS | BREKING NEWS| 03-04-2024

ದಾವಣಗೆರೆ ; ದಾವಣಗೆರೆ ಜಿಲ್ಲೆ ಹರಿಹರ ನಗರದ ಸಿದ್ದೇಶ್ವರ ಪ್ಯಾಲೇಸ್ ನಲ್ಲಿ ಏಪ್ರಿಲ್ 6ರಂದು ಜೆಡಿಎಸ್-ಬಿಜೆಪಿ ಸಮ್ಮಿಲನ ಸಮಾವೇಶ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ವೇಳೆ ಇತಿಹಾಸ ಸೃಷ್ಟಿಸುವಂತಹ ಮೆರವಣಿಗೆ ನಡೆಸಲಾಗುವುದು ಎಂದು ದಾವಣಗೆರೆಯಲ್ಲಿ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್ ಹೇಳಿಕೆ ನೀಡಿದ್ದಾರೆ..

ದಾವಣಗೆರೆಯಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ಒಗ್ಗಟ್ಟು ಪ್ರದರ್ಶನ ನಡೆಸಿದೆ, ಈ ವೇಳೆ ಮಾತನಾಡಿದ ಎಸ್ ಎಸ್ ಶಿವಶಂಕರ್, ರಾಜ್ಯದಲ್ಲಿ ಗ್ಯಾರಂಟಿಗಳಿಂದ ಈ ರಾಜ್ಯ ಆಳಲಿಕ್ಕೆ ಸಾಧ್ಯವಿಲ್ಲ, ಸರ್ಕಾರ ಅಭಿವೃದ್ಧಿ ಮರೆತಿದೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ತಾಂಡವಾಡುತ್ತಿದೆ, ಇದೆಲ್ಲವನ್ನು ಮನಗೊಂಡು ದೇಶದ ಹಿತ, ರಾಜ್ಯದ ಅಭಿವೃದ್ಧಿಗಾಗಿ ನಾವೆಲ್ಲ ಒಂದಾಗಿ ಕೆಲಸ ಮಾಡುವ ಸಂಕಲ್ಪ ತೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು, ಎರಡು ಬಜೆಟ್ ಮಂಡಿಸಿದ್ದರೂ ದಾವಣಗೆರೆ ಜಿಲ್ಲೆಗೆ ಒಂದು ಬಿಡಿಗಾಸು ನೀಡಿಲ್ಲ, ಮತದಾರರು ದೇಶದ ರಕ್ಷಣೆ ಮತ್ತು ಅಭಿವೃದ್ಧಿಯನ್ನು ನೋಡುತ್ತಿದ್ದಾರೆ, ರಾಮ ಮಂದಿರ ಉದ್ಘಾಟನೆ ಆದ ಮೇಲೆ ದೇಶದಲ್ಲಿ ಸಂಚಲನ ಮೂಡಿದೆ, ದೇಶದಲ್ಲಿನ ಉಗ್ರವಾದ ಕೋಮುವಾದ ಜಾತಿವಾದ ಎಲ್ಲವನ್ನು ಹತ್ತಿಕ್ಕಿ, ದೇಶದ ಅಭಿವೃದ್ಧಿ ಭವಿಷ್ಯದ ಬಗ್ಗೆ ಚಿಂತನೆ ಮಾಡುವ ಎನ್ ಡಿಎ ಅಭ್ಯರ್ಥಿ ಗಳಿಗೆ ಬೆಂಬಲ ಇದೆ, ಗಾಯಿತ್ರಿ ಸಿದ್ದೇಶ್ವರ್ ಗೆಲ್ಲಿಸುವುದು ನಮ್ಮ ಗುರಿ, ಜೆಡಿಎಸ್ ಪಕ್ಷ ಜಿಲ್ಲಾದ್ಯಂತ ಸಂಪೂರ್ಣ ಬೆಂಬಲ ನೀಡುತ್ತದೆ, ಪಕ್ಷದ ಅಭ್ಯರ್ಥಿ ಗೆಲ್ಲೋವರೆಗೆ ವಿರಾಮಿಸಲ್ಲ, ಹರಿಹರ ಕ್ಷೇತ್ರ ಒಂದು ಕಾಲ ಲಕ್ಷಕ್ಕಿಂತ ಹೆಚ್ಚು ಮತ ಪಡೆಯುತ್ತೇವೆ ಎಂದರು..

ಏಪ್ರಿಲ್ 6ರಂದು ಸಂಜೆ ಜೆಡಿಎಸ್ ಬಿಜೆಪಿ ಸಮ್ಮಿಲನ ಸಮಾವೇಶ ನಡೆಯಲಿದೆ, ಸಮಾವೇಶದಲ್ಲಿ ಜಿಲ್ಲೆಯ ಬಿಜೆಪಿ ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗಿ ಯಾಗುತ್ತಾರೆ, ಬಳಿಕ ದಾವಣಗೆರೆಯಲ್ಲಿ ನಾಮಪತ್ರ ಸಲ್ಲಿಕೆಗೆ ಬೃಹತ್ ಮೆರವಣಿಗೆ ಮಾಡುತ್ತೇವೆ, ಇತಿಹಾಸದಲ್ಲೇ ಅಂತಹ ಮೆರವಣಿಗೆ ಆಗಿರಬಾರದು, ಬೃಹತ್ ಮೆರವಣಿಗೆ ಮಾಡಿ ದೇಶಕ್ಕಾಗಿ ಮೋದಿ ಗೆಲ್ಲಿಸುತ್ತೇವೆ ಎಂದು ತಿಳಿಸಿದರು..

ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ. ಪಿ. ಹರೀಶ್, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ನಿಕಟಪೂರ್ವ ಅಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಕಡ್ಲೇಬಾಳು ಧನಂಜಯ ಕಡ್ಲೇಬಾಳ್, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಸ್ ಟಿ ವೀರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಅಮಾನುಲ್ಲಾ ಖಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು.