POWER SAMACHARA | KANNADA NEWS | BREKING NEWS| 10-10-2023.. ದಾವಣಗೆರೆ: ರಾಜ್ಯದಲ್ಲಿ ಭಾರೀ ದಿಗ್ವಿಜಯ ಸಾಧಿಸಿರುವ ಕಾಂಗ್ರೆಸ್ ಗೆ ಮುಂದೆ ಎಂಪಿ ಚುನಾವಣೆ ಸವಾಲಾಗಿ ನಿಂತಿದೆ, ದಾವಣಗೆರೆಯಲ್ಲಿ ಬಿಜೆಪಿ ವಿರುದ್ದ ಸತತ ಆರು ಭಾರೀ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಈ ಭಾರೀ ಶತಾಯಗತಾಯ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿದೆ, ಆದ್ರೆ ಅದ್ಯಾಕೋ ಗೊತ್ತಿಲ್ಲ, ಸಿಎಂ ಸಿದ್ದರಾಮಯ್ಯ ಆಪ್ತರ ನಡುವೆ ಆಕ್ರೋಶ ಭುಗಿಲೆದ್ದಿದ್ದು, ತಣ್ಣಗಾಗುವ ಲಕ್ಷಣಗಳು ಕಾಣ್ತಿಲ್ಲ.. ಹೌದು.. ಅಹಿಂದ ಮತಗಳೇ ಹೆಚ್ಚಿರುವ ದಾವಣಗೆರೆ ಜಿಲ್ಲೆಯಲ್ಲಿ ಈ ಹಿಂದೆ ಕುರುಬ ಸಮುದಾಯದ ಚನ್ನಯ್ಯ ಒಡೆಯರ್ ಸತತ ಗೆದ್ದು ಬರ್ತಾ ಇದ್ದರು, ಆದರೆ ಸುಮಾರು ಮೂವತ್ತು ವರ್ಷಗಳಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವನ್ನೇ ನೋಡಿಲ್ಲ, ಸತತ ನಾಲ್ಕು ಭಾರೀ ಬಿಜೆಪಿ ಪಕ್ಷದಿಂದ ಜಿಎಂ ಸಿದ್ದೇಶ್ವರ್ ಆಯ್ಕೆಗೊಂಡು ಇತಿಹಾಸ ನಿರ್ಮಿಸಿದ್ದಾರೆ, ಅಹಿಂದ ಪ್ರಾಬಲ್ಯವಿದ್ದರು ಸಹ ಕಾಂಗ್ರೆಸ್ ಗೆ ಎಂಪಿ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ, ಸತತ ಮೂರು ಭಾರೀ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಜಿಎಂ ಸಿದ್ದೇಶ್ವರ್ ವಿರುದ್ದ ಸೋತಿದ್ದು ಯಾರು ಮರೆಯುವಂತಿಲ್ಲ, 2024ರ ಚುನಾವಣೆಯಲ್ಲಿ ಬಿಜೆಪಿಯಿಂದ ಮತ್ತದೇ ಜಿಎಂ ಸಿದ್ದೇಶ್ವರ್ ಅವರು ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ ಎನ್ನಲಾಗ್ತಿದೆ, ಆದ್ರೆ ಇತ್ತ ಕಾಂಗ್ರೆಸ್ ನಲ್ಲಿ ಒಂದಾದ ಮೇಲೊಂದರಂತೆ ವಿವಾದಗಳು ಭುಗಿಲೇಳುತ್ತಿವೆ, ಶಾಮನೂರು ಶಿವಶಂಕರಪ್ಪ ಲಿಂಗಾಯಿತ ಅಧಿಕಾರಿಗಳು ಮೂಲೆಗುಂಪು ವಿಚಾರ ಕಾಂಗ್ರೆಸ್ ಗೆ ಭಾರೀ ಡ್ಯಾಮೇಜ್ ಆಗಿದ್ರೆ, ಇತ್ತ ಎಂಪಿ ಟಿಕೆಟ್ ಗಾಗಿ ನಾಯಕರ ಕಿತ್ತಾಟ ಎದ್ದಿದೆ ..
ಸಿದ್ದರಾಮಯ್ಯ ಆಪ್ತರ ನಡುವೆ ಕಾಳಗ..
ಇತ್ತ ಸತತ ಸೋಲು ಕಂಡಿರುವ ಕಾಂಗ್ರೆಸ್ ನಲ್ಲಿ ಎಲ್ಲವು ಸರಿ ಇಲ್ಲ ಎನ್ನೋದು ಎದ್ದು ಕಾಣ್ತಿದೆ, ಟಿಕೆಟ್ ಗಾಗಿ ಈಗಿನಿಂದಲೇ ಕೆಸರೆರಚಾಟ ನಡೆಯುತ್ತಿದೆ, ದಾವಣಗೆರೆ ಲೋಕಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಗಾಗಿ ಸಿಎಂ ಸಿದ್ದರಾಮಯ್ಯ ಆಪ್ತರ ನಡುವೆ ಬಿಗ್ ಫೈಟ್ ನಡೆಯುತ್ತಿದೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಕಳೆದ ಭಾರೀ ಬಹಳ ಅಂತರದಲ್ಲಿ ಎಂಪಿ ಚುನಾವಣೆಯಲ್ಲಿ ಸೋತಿದ್ದ ಹೆಚ್ ಬಿ ಮಂಜಪ್ಪ ಹಾಗೂ ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ವಿನಯ್ ಕುಮಾರ್ ನಡುವೆ ಟಿಕೆಟ್ ಗಾಗಿ ಬಿಗ್ ಫೈಟ್ ನಡೀತ ಇದೆ, ಈ ಹಿನ್ನಲೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಸುದ್ದಿಗೋಷ್ಠಿ ಕರೆದು, ನಿನ್ನೆ ಮೊನ್ನೆ ಬಂದೋರಿಗೆಲ್ಲ ಟಿಕೆಟ್ ಇಲ್ಲ ಎಂದು ಹೇಳಿಕೆ ನೀಡಿದ್ದು ಕಿಡಿ ಹೊತ್ತಲು ಕಾರಣವಾಗಿದೆ, ಇನ್ನೂ ಹೆಚ್ ಬಿ ಮಂಜಪ್ಪ ಅವರಿಗೆ ಟಾಂಗ್ ನೀಡಿರುವ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್, ಇದು ಪ್ರಜಾಪ್ರಭುತ್ವ ಯಾರಾದರು ಸ್ಪರ್ಧೆ ಮಾಡಬಹುದು, ಬಡವರ ಸೇವೆ ಮಾಡುತ್ತಿರೋದು ಪಕ್ಷ ದ್ರೋಹವೇ, ಮೊದಲು ಜಿಲ್ಲೆಯಲ್ಲಿ ಸರಿಯಾಗಿ ಪಕ್ಷ ಸಂಘಟನೆ ಮಾಡಿ ಎಂದು ತಿರುಗೇಟು ನೀಡಿದ್ದಾರೆ.
ಶಾಸಕರ ಮಧ್ಯೆ ಪರ-ವಿರೋಧದ ತಿಕ್ಕಾಟ..!
ಇನ್ನೂ ಎಂಪಿ ಟಿಕೆಟ್ ವಿಚಾರ ಕಾಂಗ್ರೆಸ್ ಶಾಸಕರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ನಡುವೆ ಪರ ವಿರೋಧ ವ್ಯಕ್ತವಾಗಿದೆ, ಎಲ್ಲಿಂದಲೋ ಬಂದವರಿಗೆ ಮಣೆ ಹಾಕೋಲ್ಲ, ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಗೆ ಮಣೆ ಹಾಕುತ್ತದೆ, ಬಾವುಟ ಹಿಡಿದು ಪೋಸ್ಟರ್ ಹಾಕಿದವರಿಗೆ ಮೊದಲ ಆದ್ಯತೆ, ಎಲ್ಲೋ ಇದ್ದು ಈಗ ಬಂದರೆ ನಡೆಯಲ್ಲ ಎಂದು ಸಚಿವ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದರೆ, ಇತ್ತ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಒಂದೇ ಮನೆಗೆ ಎಂಎಲ್ ಎ ಸೀಟು ಬೇಕು, ಎಂಪಿನೂ ಬೇಕು ಅಂದರೆ ಆಗಲ್ಲ, ಅಲ್ಲಿ ಇಬ್ಬರು ಎಂಎಲ್ ಎ ಇದ್ದಾರೆ ಎಂದು ಪರೋಕ್ಷವಾಗಿ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಗ್ ನೀಡಿದ್ದಾರೆ, ಎಂಪಿ ಸೀಟು ಹೊಸಬರಿಗೆ ಕೊಡಲಿ, ಮುಂದೇ ಹೊಸಬರು ಪಕ್ಷಕ್ಕೆ ಆಸ್ತಿ ಆಗುತ್ತಾರೆ ಎಂದು ವಿನಯ್ ಕುಮಾರ್ ಗೆ ಬೆಂಬಲ ವ್ಯಕ್ತಪಡಿಸಿದ್ದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.. ಒಟ್ಟಾರೆ ದಾವಣಗೆರೆ ಕಾಂಗ್ರೆಸ್ ನಲ್ಲಿ ಎಂಪಿ ಟಿಕೆಟ್ ಗಾಗಿ ದೊಡ್ಡ ಮಟ್ಟದ ಗದ್ದಲ ಎದ್ದಿದೆ, ನಾಯಕರು, ಶಾಸಕರು ಆರೋಪ ಪ್ರತ್ಯಾರೋಪ ತೊಡಗಿದ್ದು, ವಿವಾದ ಎಲ್ಲಿಗೆ ಬಂದು ತಲುಪುತ್ತೋ ಕಾದು ನೋಡಬೇಕಿದೆ..